{ಕರ್ನಾಟಕ} ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. == ಪಶ್ಚಿಮ ಘಟ್ಟಗಳ ಸೆರಗಿನಲ್ಲಿ == ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ. == ಕರ್ನಾಟಕದ ನಕ್ಷೆ ಮೇಲೆ ಪ್ರಮುಖ ಜಲಪಾತಗಳನ್ನು ಗುರುತಿಸುವುದು == === ಕೊಡಗು ಜಿಲ್ಲೆ === ಅಬ್ಬಿ ಜಲಪಾತ ಮಲ್ಲಳ್ಳಿ ಜಲಪಾತ ಇರುಪ್ಪು ಜಲಪಾತ ಚೇಲಾವರ ಜಲಪಾತ ಮಾದಂಡಬ್ಬಿ ಜಲಪಾತ === ಮಂಡ್ಯ ಜಿಲ್ಲೆ === ಗಗನಚುಕ್ಕಿ ಜಲಪಾತ (ಶಿವನ ಸಮುದ್ರ) === ಚಾಮರಾಜನಗರ ಜಿಲ್ಲೆ === ಭರಚುಕ್ಕಿ ಜಲಪಾತ (ಶಿವನ ಸಮುದ್ರ) === ಮೈಸೂರು ಜಿಲ್ಲೆ === ಚುಂಚನಕಟ್ಟೆ ಜಲಪಾತ === ಚಿಕ್ಕಮಗಳೂರು ಜಿಲ್ಲೆ === ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ) ಹೆಬ್ಬೆ ಜಲಪಾತ ಸಿರಿಮನೆ ಜಲಪಾತ ಕಲ್ಹತ್ತಿಗಿರಿ ಜಲಪಾತ ಮಾಣಿಕ್ಯಧಾರ ಜಲಪಾತ ಶಾಂತಿ ಜಲಪಾತ ಮಘೇಬೈಲ್ ಜಲಪಾತ ಕೆಸವೆ ಜಲಪಾತ ಹೊನ್ನಮ್ಮನಹಳ್ಳ ಜಲಪಾತ === ಉತ್ತರಕನ್ನಡ ಜಿಲ್ಲೆ === ಸಾತೋಡಿ ಜಲಪಾತ ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ ಮಾಗೋಡು ಜಲಪಾತ ಬೆಣ್ಣೆ ಹೊಳೆ ಜಲಪಾತ ವಾಟೆ ಹಳ್ಳ ಜಲಪಾತ ಬುರುಡೆ ಜಲಪಾತ ಅಥವಾ ಬುರುಡೆ ಜೋಗ ವಿಭೂತಿ ಜಲಪಾತ ಶಿವಗಂಗೆ ಜಲಪಾತ ಲಾಲ್ಗುಳಿ ಜಲಪಾತ ಅಣಶಿ ಜಲಪಾತ ಅಪ್ಸರಕೊಂಡ ಜೋಗ ಜಲಪಾತ ದೇವಕಾರ ಅಥವಾ ಕಾನೂರ ಜಲಪಾತ === ದಕ್ಷಿಣಕನ್ನಡ ಜಿಲ್ಲೆ === ಆಲೇಖಾನ್ ಜಲಪಾತ ಲೈನ್ಕಜೆ ಜಲಪಾತ ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ === ಉಡುಪಿ ಜಿಲ್ಲೆ === ಕೋಸಳ್ಳಿ ಜಲಪಾತ ಜೋಮ್ಲು ತೀರ್ಥ === ಶಿವಮೊಗ್ಗ ಜಿಲ್ಲೆ === ಜೋಗ ಜಲಪಾತ ಹಿಡ್ಲುಮನೆ / ಹಿತ್ಲುಮನೆ ಜಲಪಾತ ಕೂಡ್ಲು ತೀರ್ಥ ಜಲಪಾತ ದಬ್ಬೆ ಜಲಪಾತ ಬರ್ಕಣ ಜಲಪಾತ ಅಚಕನ್ಯ ಜಲಪಾತ ಕುಂಚಿಕಲ್ ಜಲಪಾತ ಬಾಳೆಬರೆ ಜಲಪಾತ === ಬೆಳಗಾವಿ ಜಿಲ್ಲೆ === ಗೋಕಾಕ್ ಜಲಪಾತ ಗೊಡಚಿನಮಲ್ಕಿ ಜಲಪಾತ === ಬೆಂಗಳೂರು ಜಿಲ್ಲೆ === ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ) === ರಾಮನಗರ ಜಿಲ್ಲೆ === ಚುಂಚಿ ಜಲಪಾತ === ಕೊಪ್ಪಳ ಜಿಲ್ಲೆ === ಕಪಿಲ ಜಲಪಾತ == ಹೊರಗಿನ ಸಂಪರ್ಕಗಳು == ಡ್ರೀಮ್ ರೂಟ್ಸ್